   ಮೂಲದೊಡನೆ ಪರಿಶೀಲಿಸಿ

ಓಜೋ಼ನಾಲಿಸಿಸ್: ಅಪರ್ಯಾಪ್ತ ಸಂಯುಕ್ತಗಳಲ್ಲಿ ಅ-ಅ ದ್ವಿಬಂಧಸ್ಥಾನ ಪತ್ತೆಮಾಡಲು ಆಗಾರ್ಯ್‌ನಿಕ್ ರಸಾಯನವಿಜ್ಞಾನದಲ್ಲಿ ಉಪಯೋಗಿಸುವ ಕ್ರಿಯೆ. ಇದರಲ್ಲಿ ಒಂದು ಅಪರ್ಯಾಪ್ತ ಸಂಯುಕ್ತವನ್ನು ಓಜೋ಼ನಿನೊಡನೆ ವರ್ತಿಸಿ ಅದರ ಓಜೋ಼ನೈಡನ್ನು ಪಡೆಯಲಾಗುವುದು. ಈ ಓಜೋ಼ನೈಡನ್ನು ಜಲಜನಕೀಕರ್ಷಿಸಿದಾಗ (ಹೈಡ್ರೊಲೈಸ್) ಅಥವಾ ಆಮ್ಲದೊಂದಿಗೆ ವರ್ತಿಸಿದಾಗ ಆಲ್ಡಿಹೈಡ್, ಕೀಟೋನ್ ಅಥವಾ ಕಾರ್ಬಾಕ್ಸಿಲಿಕ್ ಆಮ್ಲಗಳ ಮಿಶ್ರಣವಾಗುತ್ತದೆ. ಹಾಗೆ ಉತ್ಪತ್ತಿಯಾದ ಆಲ್ಡಿಹೈಡುಗಳ ಮತ್ತು ಕೀಟೋನುಗಳ ರಚನೆ ಕಂಡುಹಿಡಿಯುವುದರಿಂದ ಮೂಲ ಅಪರ್ಯಾಪ್ತ ಸಂಯುಕ್ತದಲ್ಲಿನ ಅ-ಅ ದ್ವಿಬಂಧನ ಸ್ಥಾನವನ್ನು ನಿರ್ಧರಿಸಬಹುದು. ಉದಾಹರಣೆಗೆ ಅ6ಊ12 ಅಣುಸೂತ್ರವಿರುವ ಒಂದು ಓಲಿಫಿನ್ ಒಜೋ಼ನಾಲಿಸಿನಲ್ಲಿ ಅಸಿಟೋನ್ ಮತ್ತು ಪ್ರೊಪಿಯೊನಾಲ್ಡಿಹೈಡನ್ನು ಕೊಡುತ್ತದೆಂದಿಟ್ಟುಕೊಂಡರೆ ಆ ಓಲಿಫಿನ್ ರಚನೆ 1 ಯನ್ನು ಪಡೆದಿದೆ ಎಂಬುದಾಗಿ ಕೆಳಗಡೆ ತೋರಿಸಿರುವ ಯೋಜನೆಯ ಪ್ರಕಾರ ತೀರ್ಮಾನಿಸಬಹುದು. 
ಸ್ವಾಭಾವಿಕ ವಸ್ತುಗಳ ಅದರಲ್ಲೂ ಟಿರ್ಪೀನುಗಳ ರಚನೆಯನ್ನು ಕಂಡುಹಿಡಿಯುವಲ್ಲಿ ಓಜೋ಼ನಾಲಿಸಿಸನ್ನು ಬಹಳವಾಗಿ ಉಪಯೋಗಿಸಲಾಗಿದೆ. ಆರೋಮ್ಕಾಟಿಕ್ ಸಂಯುಕ್ತಗಳ ರಚನೆಯನ್ನು ಕುರಿತಾದ ಅಭ್ಯಾಸಗಳಲ್ಲೂ ಅಪುರ್ವ ಆಲ್ಡಿಹೈಡುಗಳ ಮತ್ತು ಕೀಟೋನುಗಳ ಸಂಶ್ಲೇಷಣೆಯಲ್ಲೂ ಓಜೋ಼ನಾಲಿಸಿಸನ್ನು ಅಳವಡಿಸಿಕೊಳ್ಳಲಾಗಿದೆ. ಉದಾಹರಣೆಗೆ ಓಲಿಯಿಕ್ ಆಮ್ಲವನ್ನು ಓಜೋ಼ನಾಲಿಸಿಸ್ ಮಾಡಿದಾಗ ಟಿ- ನೋನಾನಾಲ್ (ಪೇಲಾರ್ಗಾನಿಕ್ ಆಲ್ಡಿಹೈಡ್ ಮತ್ತು ಅಸಿಲಾಯಿಕ್ ಸೆಮಿಆಲ್ಡಿಹೈಡ್) ಕೊಡುತ್ತದೆ.
	ಅಊ3(ಅಊ2)7ಅಊ=ಊ(ಅಊ2)7ಅಔಔಊ ಲಅಊ3(ಅಊ2)7ಅಊಔ
				    + ಔಅಊ(ಅಊ2)7ಅಔಔಊ
ಈ ಕ್ರಿಯೆಯನ್ನು ಉಪಯೋಗಿಸಿಕೊಂಡು ಗ್ಲೈಕಾಲ್ ಅಲ್ಡಿಹೈಡ್, ಸಕ್ಸಿನಾಲ್ಡಿಹೈಡ್, ಅನಿಸಾಲ್ಡಿಹೈಡ್, ಪ್ಥಾಲಾಲಿಹೈಡುಗಳನ್ನು ತಯಾರಿಸುತ್ತಾರೆ. ಒಜೊ಼ಕಿನಾಲಿಸಿಸಿನಿಂದ ಓಲಿಫಿನುಗಳನ್ನು ಆಲ್ಡಿಹೈಡುಗಳಾಗಿ ಪರಿವರ್ತಿಸುವ ಸಾಮಾನ್ಯ ವಿಧಾನ ಹೀಗಿದೆ.
ಓಜೋ಼ನಾಲಿಸಿಸ್ ಮೂಲಕ ಕೀಟೋನುಗಳನ್ನು ಓಲಿಫಿನುಗಳಿಂದ ತಯಾರಿಸುವ ಸಾಮಾನ್ಯ ವಿಧಾನ ಹೀಗಿದೆ :
ಒಂದು ಸಂಯುಕ್ತಕ್ಕೆ ಎರಡು ಅಥವಾ ಹೆಚ್ಚು ಈನಾಲ್ ರೂಪಗಳು ವಿವರಣೆಯ ದೃಷ್ಟಿಯಿಂದ ಸಾಧ್ಯವಾಗಿದ್ದರೆ ಓಜೋ಼ನಾಲಿಸಿಸ್ ಉಪಯೋಗಿಸಿಕೊಂಡು ಅದಕ್ಕೆ ಯಾವ ರೂಪದ ರಚನೆ ಇದೆ ಎಂಬುದನ್ನು ತೀರ್ಮಾನಿಸಬಹುದು, ಉದಾಹರಣೆಗೆ ಹೆಕ್ಸೆನ್ 2:4 ಡೈಯೊನ್, ಅಊ3ಅಔಅಊ2ಅಔಅಊ2ಅಊ3ಕ್ಕೆ ಎರಡು ಈನಾಲ್ ರೂಪಗಳು ಸಾಧ್ಯ.
II ಓಜೋ಼ನಾಲಿಸಿಸ್ ಮಾಡಿದಾಗ ಅಊ3ಅಔಔಊ ಮತ್ತು ಅಊ3ಅಊ2ಅಔಅಊಔ ಸಂಯುಕ್ತಗಳನ್ನೂ III ಅಊ3ಅಔಅಊಔ  ಮತ್ತು ಅಊ3ಅಊ2ಅಔಔಊ   ಸಂಯುಕ್ತಗಳನ್ನೂ ಕೊಡುತ್ತವೆ. ಈಗ ಈ ಸಂಯುಕ್ತಗಳನ್ನು ಗುರುತಿಸುವುದರಿಂದ II ಮತ್ತು III ರಲ್ಲಿ ಯಾವುದಾದರೊಂದು ಅಥವಾ ಎರಡೂ ಈನಾಲ್ ರೂಪಗಳೇ ಎಂದು ನಿರ್ಧರಿಸಬಹುದು.
ಓಜೋ಼ನಾಲಿಸಿಸನ್ನು ಸ್ಟೀರಾಯಿಡ್ ರಸಾಯನವಿಜ್ಞಾನದಲ್ಲೂ ಮತ್ತು ಸಿವಿಟೋನ್ ರಚನೆ ಸ್ಥಾಪನೆಯಲ್ಲೂ ವಿಶೇಷವಾಗಿ ಬಳಸಲಾಗಿದೆ. 1955ರಲ್ಲಿ ಸ್ಕ್ಮಿಟ್ ಎಂಬಾತ ಫಿನಾನ್ಥ್ರೀನಿನ ಸ್ಥಿರ ಓಜೋ಼ನೈಡನ್ನು ಈ ಕ್ರಿಯೆಯಿಂದಲೇ ತಯಾರಿಸಿದ. ಈ ಓಜೋ಼ನೈಡುಗಳ ವಿವರವಾದ ರಚನೆ ಇನ್ನೂ ಪರೀಕ್ಷಾಮಟ್ಟದಲ್ಲಿದೆ. ಖ್ಯಾತ ಅಭ್ಯಾಸಗಳನ್ನು ಮಾಡಿದ ಎಚ್. ಸ್ಟೌಡಿಂಗರ್ ಕೊಟ್ಟಿರುವ ರಚನೆಗಿಂತ ಅತಿ ವಿಶಾಲ ವೈವಿಧ್ಯ ರಚನೆಗಳು ಓಜೋ಼ನೈಡುಗಳಿಗೆ ಇರುವುದು ಸಾಧ್ಯವೆಂಬುದಾಗಿ ಇತ್ತೀಚಿನ ಸಂಶೋಧನೆಗಳು ಸೂಚಿಸುತ್ತದೆ.	(ಪಿ.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ